ಸೋಮವಾರ, ಅಕ್ಟೋಬರ್ 19, 2009

jaga jaahiru

ಜಗ- ಜಾಹೀರು      ಜಗ - ಜಾಹೀರು
ಲಕ್ಸ್ .. ಸಿನಿಮಾ ತಾರೆಯರ ಸೌಂದರ್ಯ ಸಾಬೂನು ..
ಕಾಲ್ಗೆಟ್.... ಸುರಕ್ಷಾ ಚಕ್ರ ...
ಲೈಫ್ ಬಾಯ್ ಎಲ್ಲಿದೆಯೋ ಅಲ್ಲಿದೇ ಆರೋಗ್ಯಾ ....
ಹೌದು .. ಆ ಎಲ್ಲ ಜಾಹಿರಾತುಗಳು ,  ಮಾಡೆಲ್ ತಾರೆಯರು ,  ಹಳೆಯ ಕಥೆಗಳೇ ಸರಿ.
ಸಿನೆಮಾಗಳ  ಆರಂಭದಲ್ಲಿದ್ದ ಕಪ್ಪು-ಬಿಳಿ ನ್ಯೂಸ್  ರೀಲ್ ,  ಹರಿದು ಹೋದ , ಗೀಚು ಬಿದ್ದ
ಫೋಟೂ ರೀಲುಗಳು, ಮಾರು-ಮಾರುಗಟ್ಟಲೆ ಉದುರಿ ಸಿಕ್ಕ ನೆಗೆಟಿವ್ ರೋಲುಗಳು..
ಬಿಸಿಲಿಗೋ ಬೆಳಕಿಗೋ ಹಿಡಿದು ನೋಡುವ, ಬಚ್ಚಿಟ್ಟುಕೊಳ್ಳುವ ಹೆಮ್ಮೆಯ ದಿನಗಳು ...
ಕಳೆದ ಹಳೆಯ ದಿನಗಳ ಆಸ್ತಿ -ಪಾಸ್ತಿ .
ಇಂದು ಬಣ್ಣ ಬಣ್ಣದ ಬಯಲಿನಲ್ಲಿ, ಹಾಡು-ಪಾಡುಗಳ ಖಯಾಲಿಯಲ್ಲಿ, ಸಣ್ಣ ಸಣ್ಣ ಕಥೆಗಳ
ಹಂದರದಲ್ಲಿ, ಪಾತ್ರ-ಸೂತ್ರಗಳ ಹಂಬಲದಲ್ಲಿ ... ಬೆಳೆಯುತ್ತಾ  ಪ್ರಸ್ತುತ ವಿಸ್ತರಿಸಿಕೊಂಡ
ತನ್ನದೇ ಪ್ರತ್ಯೇಕ ಮಾಂತ್ರಿಕ ಲೋಕ -ವಾಣಿ-ದರ್ಶನ ..ಪ್ರದರ್ಶನ..ನಿದರ್ಶನ ..
ನಿರ್ದೇಶನ ಮಾರ್ಗವು ಸಂರಚನೆಗೊಂಡಿದೆ. ನಾವು-ನೀವುಜಾಹಿರಾತಿನ ಈ ಜಗತ್ತು ಕಂಡಷ್ಟು ಆಯಾಮಗಳು , ಅದರ ಇನ್ನೆಷ್ಟೋ ಸಾಧ್ಯತೆಗಳು..
ನನಗೆ ನಿಲುಕಿದಷ್ಟು,   ಜಗ-ಜಾಹೀರು

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ